ಗುರುಸೇವೆಯಲ್ಲಿ ತನು ಸವೆದು,
ಲಿಂಗಪೂಜೆಯಲ್ಲಿ ಮನ ಸವೆದು,
ಜಂಗಮದಾಸೋಹದಲ್ಲಿ ಧನ ಸವೆದು,
ಇಂತೀ ತ್ರಿವಿಧಸಂಪತ್ತು ನೆಲೆಗೊಂಡ ಸದ್ ಭಕ್ತಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Gurusēveyalli tanu savedu,
liṅgapūjeyalli mana savedu,
jaṅgamadāsōhadalli dhana savedu,
intī trividhasampattu nelegoṇḍa sad bhaktaṅge
namō namō embenayya akhaṇḍēśvarā.