ತನುವಿನ ಪ್ರಕೃತಿಯಳಿದು,
ಮನದ ಮಾಯವಡಗಿ,
ಆತ್ಮನ ಅಹಂಮಮತೆ ಕೆಟ್ಟು,
ತಾನೆ ತಾನಾಗಿ ಮಾಡಿ ಮೈಮರೆದ,
ಮಹಾಮಹಿಮರ ತೋರಿಸಿ ಬದುಕಿಸಯ್ಯ
ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Tanuvina prakr̥tiyaḷidu,
manada māyavaḍagi,
ātmana ahammamate keṭṭu,
tāne tānāgi māḍi maimareda,
mahāmahimara tōrisi badukisayya
enna akhaṇḍēśvarā.