Index   ವಚನ - 208    Search  
 
ಪರಸ್ತ್ರೀಯರ ಮುಟ್ಟದಿರಬೇಕು. ಪರಧನವನಪಹರಿಸದಿರಬೇಕು. ಪರದೈವವ ಪೂಜಿಸದಿರಬೇಕು. ಪರಹಿಂಸೆಯ ಮಾಡದಿರಬೇಕು. ಪರಲೋಕದ ಫಲಪದವ ಬಯಸದಿರಬೇಕು. ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷ್ಠೆ ಬಲಿದಿರಬೇಕು. ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ. ಅದೆಂತೆಂದೊಡೆ: ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ | ಲಿಂಗನಿಷ್ಠಾನಿಯುಕ್ತಾತ್ಮಾ ಮಾಹೇಶ್ವರಮಹಾಸ್ಥಲಂ ||'' ಎಂದುದಾಗಿ, ಇಂತಪ್ಪ ಪರಮ ಮಾಹೇಶ್ವರನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.