Index   ವಚನ - 213    Search  
 
ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ ಹಿಡಿದುಬಿಡೆನೆಂಬ. ಛಲವಿರಬೇಕು ನಿತ್ಯನೇಮದಲ್ಲಿ ಹಿಡಿದು ಬಿಡೆನೆಂಬ. ಛಲವಿರಬೇಕು ಶೀಲವ್ರತದಲ್ಲಿ ಹಿಡಿದು ಬಿಡೆನೆಂಬ. ಛಲವಿರಬೇಕು ನಮ್ಮ ಅಖಂಡೇಶ್ವರಲಿಂಗವ ಕೂಡಿ ಎಂದೆಂದೂ ಅಗಲಬಾರದೆಂಬ ನೈಷ್ಠೆಯಲ್ಲಿ.