Index   ವಚನ - 214    Search  
 
ಗುರುಭಕ್ತಿಯ ಮಾಡಿದ ಬಳಿಕ ಸರ್ವ ಅವಗುಣಂಗಳು ಹಿಂಗಿರಬೇಕು. ಲಿಂಗಪೂಜೆಯ ಮಾಡಿದ ಬಳಿಕ ಅಂಗದ ಪ್ರಕೃತಿ ಹಿಂಗಿರಬೇಕು. ಜಂಗಮಾರ್ಚನೆಯ ಮಾಡಿದ ಬಳಿಕ ಸಂಸಾರದಲ್ಲಿ ಮೋಹವ ತೊಲಗಿರಬೇಕು. ಪಾದೋದಕ ಪ್ರಸಾದವ ಕೊಂಡ ಬಳಿಕ ಇಹಪರ ಭೋಗ ಮೋಕ್ಷಂಗಳ ಬಯಕೆ ಅರಿತಿರಬೇಕು ಇದೇ ನಮ್ಮ ಅಖಂಡೇಶ್ವರಲಿಂಗದ ಕೂಟ.