Index   ವಚನ - 215    Search  
 
ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ. ಫಲಪದವಿಯ ಬಯಸಿ ಮಾಡಲಾಗದು ಲಿಂಗಪೂಜೆಯ. ಫಲಪದವಿಯ ಬಯಸಿ ಮಾಡಲಾಗದು ಜಂಗಮಾರ್ಚನೆಯ. ಅದೇನು ಕಾರಣವೆಂದೊಡೆ: ಬಯಕೆಯ ಭಕ್ತಿಯ, ಪೂರ್ವಪುರಾತನರು ಮಚ್ಚರು. ನಮ್ಮ ಅಖಂಡೇಶ್ವರದೇವನು ಹಂಗಿನ ಭಕ್ತರನೊಲ್ಲ ನೋಡಾ.