Index   ವಚನ - 228    Search  
 
ನುಡಿಯಲ್ಲಿ ಎರಡು ನುಡಿಯನು; ನಡೆಯಲ್ಲಿ ಎರಡು ನಡೆಯನು; ನುಡಿಯಂತೆ ನಡೆ ವಿಸ್ತರಿಸುವ; ನಡೆಯಂತೆ ನುಡಿ ವಿಸ್ತರಿಸುವ; ಹಿಡಿವನು ಗುರುಲಿಂಗಜಂಗಮ ದಾಸೋಹವ. ಬಿಡುವನು ಹೊನ್ನು ಹೆಣ್ಣು ಮಣ್ಣೆಂಬ ತ್ರಿಮಲದಾಸೆಯ. ಇಂತಪ್ಪ ವೀರಮಾಹೇಶ್ವರನನೇನೆಂಬೆನಯ್ಯ ಅಖಂಡೇಶ್ವರಾ.