Index   ವಚನ - 229    Search  
 
ಹಿಡಿದುದ ಬಿಡುವವನಲ್ಲ; ಬಿಟ್ಟುದ ಹಿಡಿವವನಲ್ಲ. ನಡುಮಧ್ಯದಲ್ಲಿ ಬಡತನ ಎಡರು ಕಂಟಕ ಬಂದಲ್ಲಿ, ಕಡುದುಃಖಿಯಾಗಿ ಬಳಲುವವನಲ್ಲ. ಅಡಿಗಡಿಗೆ ಲಿಂಗಪೂಜೆಯ, ಅಡಿಗಡಿಗೆ ಜಂಗಮದಾಸೋಹವ ಮರೆವವನಲ್ಲ, ಇದು ಕಾರಣ ಅಖಂಡೇಶ್ವರಾ, ನಿಮ್ಮ ಮಹೇಶ್ವರನ ಚಾರಿತ್ರವು ಇಹಲೋಕದೊಳಗಿಲ್ಲಾ.