Index   ವಚನ - 239    Search  
 
ಇಂದ್ರಿಯಂಗಳಿಚ್ಛೆಯಲ್ಲಿ ಇರಿಸದಿರಯ್ಯ ಎನ್ನ. ಕರಣಂಗಳ ಕತ್ತಲೆಯಲ್ಲಿ ಕೆಡಹದಿರಯ್ಯ ಎನ್ನ. ಕಾಯಜೀವ ಸಂಸಾರದಲ್ಲಿ ಕಳವಳಸಿ ಮುಂದುಗೆಡಿಸದಿರಯ್ಯ ಎನ್ನ. ಮನದ ಮರವೆಯಲ್ಲಿ ಸುಳಿಸದಿರಯ್ಯ ಎನ್ನ. ಭಾವದ ಭ್ರಮೆಯಲ್ಲಿ ಬಳಲಿಸದಿರಯ್ಯ ಎನ್ನ. ಅಖಂಡೇಶ್ವರಾ, ನಿಮ್ಮ ನಾ ಸೆರಗೊಡ್ಡಿ ಬೇಡಿಕೊಂಬೆನು.