Index   ವಚನ - 248    Search  
 
ನಾನಾ ವರ್ಣದ ಕಾಷ್ಠವ ಸುಟ್ಟಲ್ಲಿ ಏಕವರ್ಣದ ಬೂದಿಯಪ್ಪುದಲ್ಲದೆ ಅಲ್ಲಿ ಕಾಷ್ಠದ ಕುಲ ಉಂಟೇ ಅಯ್ಯ? ತೊಟ್ಟು ಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೇ ಅಯ್ಯ? ಕಷ್ಟಜನ್ಮದಲ್ಲಿ ಹುಟ್ಟಿದಾತನಾದಡಾಗಲಿ ನೆಟ್ಟನೆ ಶ್ರೀಗುರುಕಾರುಣ್ಯವ ಪಡೆದು ಇಷ್ಟಲಿಂಗಸಂಬಂಧಿಯಾಗಿ, ಆಚಾರ ಕ್ರಿಯಾಸಂಪನ್ನನಾದ ಶರಣನ ಜಾತಿಪೂರ್ವವ ಎತ್ತಿ ದೂಷಿಸುವ ಪಾತಕರ ಬಾಯಲ್ಲಿ ಬಾಲಹುಳುಗಳು ಸುರಿಯದೆ ಮಾಣ್ಬವೆ ಹೇಳಾ ಅಖಂಡೇಶ್ವರಾ?