Index   ವಚನ - 249    Search  
 
ನೀರು ಗಟ್ಟಿಗೊಂಡು ಮುತ್ತಪ್ಪುದಲ್ಲದೆ ಮುತ್ತು ನೀರಪ್ಪುದೇ ಅಯ್ಯ? ಹಾಲು ಹೆಪ್ಪುಗೊಂಡು ತುಪ್ಪವಪ್ಪುದಲ್ಲದೆ ತುಪ್ಪ ಹಾಲಪ್ಪುದೇ ಅಯ್ಯ? ಹೀನಜಾತಿಯಲ್ಲಿ ಜನಿಸಿದ ನರನು ಗುರುವಿನ ಕಾರುಣ್ಯದಿಂದ ಶಿವಜಾತಶರಣನಾದ ಬಳಿಕ ಮರಳಿ ನರನಪ್ಪನೇ ಅಯ್ಯ ಅಖಂಡೇಶ್ವರಾ.