ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
ಹುಲ್ಲ ಮೇವ ಎರಳೆಯ, ಹುಲಿಯ, ಸರಸವನಾಡಿತ್ತ ಕಂಡೆ.
ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ.
ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ?
Transliteration Kalla hōrinoḷagondu kiccu huṭṭitta kaṇḍe.
Hulla mēva eraḷeya, huliya, sarasavanāḍitta kaṇḍe.
Ellarū sattu āḍuttippuda kaṇḍe.
Innu elliya bhakuti hēḷā guhēśvarā?
Hindi Translation पत्थर के बिल में एक आग पैदा हुई देखी।
घास चरने की एक हिरण – बाघ दोनों में हँसी देखी।
सब मरकर खेलते हुए देखा।
और कहाँ की भक्ति, कहो गुहेश्वरा।
Translated by: Eswara Sharma M and Govindarao B N
Tamil Translation உடல், மனத்திலே தீ தோன்றியதைக் கண்டேன்,
புல்லை மேயும் ஜீவன் புலியை நயந்ததைக் கண்டேன்,
அனைவரும் மடிந்து ஆடியதைக் கண்டேன்,
பக்தி எங்ஙனம் அரும்பும், கூறுவாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡು = ಸಾಂಸಾರಿಕ ವಿಷಯ ಕ್ರೀಡೆಯಲ್ಲಿ ತೊಡಗು; ಎರಳೆ = ಜೀವಾತ್ಮಾ; ಎಲ್ಲರೂ = ಲೋಕದಲ್ಲಿ ವಾಸಿಸುವ ಬಹುತರ ಎಲ್ಲ ಜೀವಿಗಳು; ಕಲ್ಲಹೋರು = ಅವನಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಜಡ ಪಂಚಭೂತಗಳಿಂದಾದ ದೇಹ ಮತ್ತು ದೇಹಾಂತರಂಗ; ಕಿಚ್ಚು = ದೈಹಿಕ ಹಾಗೂ ಮಾನಸಿಕ ದಾಹ; ಸತ್ತು = ತಮ್ಮ ಮೂಲಸ್ವರೂಪವನೆ ಮರೆತು; ಹುಲಿ = ಕಾಲ; ಹುಲ್ಲು = ಪಂಚ ವಿಷಯಗಳು;
Written by: Sri Siddeswara Swamiji, Vijayapura