ಜಾತಿಪೂರ್ವಾಶ್ರಯವ ಕಳೆದು, ಸೂತಕ ಪಾತಕಂಗಳನಳಿದು,
ಅಂಗತ್ರಯಗಳಲ್ಲಿ ಮುಸುಕಿದ ಅಜ್ಞಾನ ತಾಮಸವ ಜರಿದು,
ಲಿಂಗತ್ರಯಂಗಳ ಸಂಗಸಮರಸವನರಿದ ಶರಣಂಗೆ
ಉತ್ಪತ್ತಿ-ಸ್ಥಿತಿ-ಲಯಂಗಳಿಲ್ಲ ನೋಡಾ!
ಅದೇನು ಕಾರಣವೆಂದೊಡೆ:
ಇಷ್ಟಲಿಂಗದಲ್ಲಿ ಉತ್ಪತ್ತಿ, ಪ್ರಾಣಲಿಂಗದಲ್ಲಿ ರಕ್ಷಣೆ,
ಭಾವಲಿಂಗದಲ್ಲಿ ಬಯಲನೈದಿದ ಮಹಾಶರಣಂಗೆ
ಹುಟ್ಟುಹೊಂದುಗಳು ನಷ್ಟವಾದುವಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Jātipūrvāśrayava kaḷedu, sūtaka pātakaṅgaḷanaḷidu,
aṅgatrayagaḷalli musukida ajñāna tāmasava jaridu,
liṅgatrayaṅgaḷa saṅgasamarasavanarida śaraṇaṅge
utpatti-sthiti-layaṅgaḷilla nōḍā!
Adēnu kāraṇavendoḍe:
Iṣṭaliṅgadalli utpatti, prāṇaliṅgadalli rakṣaṇe,
bhāvaliṅgadalli bayalanaidida mahāśaraṇaṅge
huṭṭuhondugaḷu naṣṭavāduvayya akhaṇḍēśvarā.