Index   ವಚನ - 254    Search  
 
ನುಡಿಯಲಾಗದು ನುಡಿಯಲಾಗದು ನಯನುಡಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ದಯಗುಣವಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಭಯಭಕ್ತಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಸ್ವಯಜ್ಞಾನವಿಲ್ಲದವರೊಡನೆ ಶಿವಾನುಭಾವವ! ಅದೇನು ಕಾರಣವೆಂದೊಡೆ: ತನ್ನ ಅರುಹಿಂಗೆ ಹಾನಿ, ಮಹಾ ಪರಿಣಾಮ ಕೆಡುವುದು. ಇದು ಕಾರಣ ಕಡುಪಾತಕ ಜಡಜೀವಿಗಳೊಡನೆ ಲಕ್ಷಕ್ಕೊಮ್ಮೆ ಕೋಟಿಗೊಂದುವೇಳೆಯಾದಡೂ ನುಡಿಯಲಾಗದಯ್ಯ ಅಖಂಡೇಶ್ವರಾ.