Index   ವಚನ - 255    Search  
 
ನುಡಿಯಬೇಕು ಸತ್ಯಸದಾಚಾರವುಳ್ಳವರೊಡನೆ ಅನುಭಾವವ. ನುಡಿಯಬೇಕು ಭಕ್ತಿಯುಕ್ತಿ ಮುಕ್ತಿಯುಳ್ಳವರೊಡನೆ ಅನುಭಾವವ. ನುಡಿಯಬೇಕು ಸಾಧು ಸಜ್ಜನ ಸದ್ ಭಕ್ತ ಶರಣರೊಡನೆ ಅನುಭಾವವ. ನುಡಿಯಬೇಕು ನಮ್ಮ ಅಖಂಡೇಶ್ವರಲಿಂಗವ ಕೂಡಬೇಕೆಂಬ ಬಯಕೆಯುಳ್ಳವರೊಡನೆ ಶಿವಾನುಭಾವವ.