Index   ವಚನ - 265    Search  
 
ಕುರುಹು ಉಂಟೇ ಮರುಳೆ ಲಿಂಗಕ್ಕೆ? ತೆರಹು ಉಂಟೇ ಮರುಳೆ ಲಿಂಗಕ್ಕೆ? ಎಲ್ಲೆಡೆಯೊಳು ಪರಿಪೂರ್ಣವಾದ ಪರಾತ್ಪರಲಿಂಗದ ನಿಲವನರಿಯದೆ ಹುಸಿಯನೆ ಕಲ್ಪಿಸಿ, ಹುಸಿಯನೆ ಪೂಜಿಸಿ, ಹುಸಿಯ ಫಲಪದವನುಂಡು ಹುಸಿಯಾಗಿ ಹೋದವರ ಕಂಡು ನಸುನಗುತಿಪ್ಪನಯ್ಯ ನಮ್ಮ ಅಖಂಡೇಶ್ವರನು.