ಸರ್ವಜಗದಲ್ಲಿ ಶಿವನಿಲ್ಲವೆಂದಡೆ
ಆ ಜಗವು ಶಿವನಿಂದಲ್ಲದೆ ಬೇರೆ ತೋರಲರಿಯದಾಗಿ,
ಪದ್ಮಪತ್ರಜಲದಂತೆ ವಿಶ್ವಪರಿಪೂರ್ಣನಾಗಿ
ಹೊದ್ದಿಯೂ ಹೊದ್ದದಿರ್ಪನು ನಮ್ಮ ಅಖಂಡೇಶ್ವರ.
Art
Manuscript
Music
Courtesy:
Transliteration
Sarvajagadalli śivanillavendaḍe
ā jagavu śivanindallade bēre tōralariyadāgi,
padmapatrajaladante viśvaparipūrṇanāgi
hoddiyū hoddadirpanu nam'ma akhaṇḍēśvara.