ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ
ಸಕಲ ಪ್ರಾಣಿಗಳ ಶಿವನೆಂದು ಭಾವಿಸಲಾಗದು.
ಅದೇನು ಕಾರಣವೆಂದೊಡೆ:
ಆ ಸಕಲ ಪ್ರಾಣಿಗಳು ಶಿವನಾದಡೆ
ಮದಮತ್ಸರಂಗಳಿಂದೆ ಒಂದನೊಂದು ಕೊಂದು ಕೂಗಿ
ತಿಂದು ತೇಗಲೇತಕೊ?
ಆ ಸಕಲ ಪ್ರಾಣಿಗಳು ಶಿವನಾದಡೆ
ಜಾತಿ ವರ್ಣಾಶ್ರಮ ಕುಲಗೋತ್ರ ನಾಮ ಸೀಮೆ
ಬಂದ ಬಟ್ಟೆಗೆ ಬಡಿದಾಡಲೇತಕೊ?
ಆ ಸಕಲ ಪ್ರಾಣಿಗಳು ಶಿವನಾದಡೆ
ಹಮ್ಮು ಬಿಮ್ಮು ಗರ್ವ ಅಹಂಕಾರ ಹೆಮ್ಮೆ ಹಿರಿತನಕೆ
ಹೊಡೆದಾಡಿ ಮಡಿದು ಹೋಗಲೇತಕೊ?
ಆ ಸಕಲ ಪ್ರಾಣಿಗಳು ಶಿವನಾದಡೆ
ಮಲತ್ರಯಂಗಳ ಬಲೆಯಲ್ಲಿ ಸಿಲ್ಕಿ
ಭವಭವಂಗಳಲ್ಲಿ ತೊಳಲಿ ಬಳಲಿ ಬೆಂಡಾಗಲೇತಕೊ?
ಇದು ಕಾರಣ,
ಅನಾದಿಸಂಸಿದ್ಧವಾದ ಪರಮ
ಜಂಗಮಲಿಂಗವೇ ಶಿವನಲ್ಲದೆ
ಭವಭವಂಗಳಲ್ಲಿ ಸತ್ತು ಹುಟ್ಟುವ
ಸಕಲ ಪ್ರಾಣಿಗಳ ಶಿವನೆಂದಡೆ
ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
Art
Manuscript
Music Courtesy:
Video
TransliterationPr̥thvi ākāśamadhyadalli utpattiyāda
sakala prāṇigaḷa śivanendu bhāvisalāgadu.
Adēnu kāraṇavendoḍe:
Ā sakala prāṇigaḷu śivanādaḍe
madamatsaraṅgaḷinde ondanondu kondu kūgi
tindu tēgalētako?
Ā sakala prāṇigaḷu śivanādaḍe
jāti varṇāśrama kulagōtra nāma sīme
banda baṭṭege baḍidāḍalētako?
Ā sakala prāṇigaḷu śivanādaḍe
ham'mu bim'mu garva ahaṅkāra hem'me hiritanake
hoḍedāḍi maḍidu hōgalētako?
Ā sakala prāṇigaḷu śivanādaḍe
malatrayaṅgaḷa baleyalli silki
Prithvi produced in the sky
Shiva is not supposed to be the best animal.
The reason is:
All those animals are Lord Shiva
Kill one another with madamsats
Eat and burn?
All those animals are Lord Shiva
Caste colorism
Strike the clothes?
All those animals are Lord Shiva
Hmmm bimmu proud arrogant pride
Do you want to die?
All those animals are Lord Shiva
Silky in the trap of the Malatrayangala
Bhavabhavaṅgaḷalli toḷali baḷali beṇḍāgalētako?
Idu kāraṇa,
anādisansid'dhavāda parama
jaṅgamaliṅgavē śivanallade
bhavabhavaṅgaḷalli sattu huṭṭuva
sakala prāṇigaḷa śivanendaḍe
aghōranaraka tappadayya akhaṇḍēśvarā.