Index   ವಚನ - 282    Search  
 
ಒಮ್ಮೆ ಜ್ಞಾನಿಯೆನಿಸಿ, ಒಮ್ಮೆ ಅಜ್ಞಾನಿಯೆನಿಸಿ, ಒಮ್ಮೆ ವಿಕಲನೆನಿಸಿ, ಒಮ್ಮೆ ನಿಃಕಲನೆನಿಸಿ, ಒಮ್ಮೆ ಭ್ರಾಂತನೆನಿಸಿ, ಒಮ್ಮೆ ನಿಭ್ರಾಂತನೆನಿಸಿ, ನಾನಾ ತೆರದಿಂದೆ ಎನ್ನ ಹುಸಿದಿಟವ ಮಾಡಿ ಕಾಡದಿರಯ್ಯ. ನೀವು ದಯಾನಿಧಿ ಎಂದು ನಂಬಿದೆನಯ್ಯ. ನಿಮ್ಮ ಕರುಣಕಟಾಕ್ಷದಿಂದೆ ನೋಡಿ ಸಲಹಯ್ಯ ಎನ್ನ ಅಖಂಡೇಶ್ವರಾ.