Index   ವಚನ - 287    Search  
 
ಅರಿದರಿದು ಗುರುಭಕ್ತಿಯು ನೆಲೆಗೊ೦ಬುದು. ಅರಿದರಿದು ಲಿಂಗಭಕ್ತಿಯು ನೆಲೆಗೊ೦ಬುದು. ಅರಿದರಿದು ಜಂಗಮಭಕ್ತಿಯು ನೆಲೆಗೊ೦ಬುದು. ಇಂತೀ ತ್ರಿವಿಧಭಕ್ತಿಯು ನೆಲೆಗೊಂಡು ಭಿನ್ನಭಾವವನಳಿದ ಸದ್ ಭಕ್ತನು ಮೂರು ಲೋಕದೊಳಗೆ ಅಖಂಡೇಶ್ವರಾ.