Index   ವಚನ - 288    Search  
 
ಗುರುಭಕ್ತನಾದ ಬಳಿಕ ಗುರುವಿಂಗೆ ಪ್ರತ್ಯುತ್ತರವ ಕೊಡದಿರಬೇಕು. ಲಿಂಗಭಕ್ತನಾದ ಬಳಿಕ ಲಿಂಗವೇ ಪ್ರಾಣವಾಗಿರಬೇಕು. ಜಂಗಮಭಕ್ತನಾದ ಬಳಿಕ ಜಂಗಮದಲ್ಲಿ ಅತಿಪ್ರೇಮ ವಿಶ್ವಾಸವ ಬಳಸಬೇಕು ನೋಡಾ ಅಖಂಡೇಶ್ವರಾ