Index   ವಚನ - 290    Search  
 
ಜಂಗಮದ ಘನವನು, ಜಂಗಮದ ನಿಲವನು ಅರಿಯದೆ ಕೆಟ್ಟರಲ್ಲ ಶಿವಶಿವಾ! ಜಂಗಮವೆಂದಡೆ ನಿಷ್ಕಳಂಕನು ನೋಡಾ! ಜಂಗಮವೆಂದಡೆ ನಿರಪೇಕ್ಷನು ನೋಡಾ! ಜಂಗಮವೆಂದಡೆ ನಿರ್ದೋಷನು ನೋಡಾ! ಜಂಗಮವೆಂದಡೆ ನಿಸ್ಪೃಹನು ನೋಡಾ! ಜಂಗಮವೆಂದಡೆ ಅಕ್ರೋಧ ಸತ್ಯವಚನನು ನೋಡಾ! ಜಂಗಮವೆಂದಡೆ ದಯಾಪರನು ಧರ್ಮಗುಣನು ನೋಡಾ! ಜಂಗಮವೆಂದಡೆ ಶಾಂತ ಶಿವಜ್ಞಾನಮೂರ್ತಿ ತಾನೆ ನೋಡಾ ಅಖಂಡೇಶ್ವರಾ.