Index   ವಚನ - 289    Search  
 
ಜಂಗಮದಲ್ಲಿ ರೂಪು ಕುರೂಪವ ನೋಡಲಾಗದು. ಜಂಗಮದಲ್ಲಿ ಉತ್ತಮ ಮಧ್ಯಮವ ನೋಡಲಾಗದು. ಜಂಗಮದಲ್ಲಿ ಕುಲಶೀಲವ ನೋಡಲಾಗದು. ಜಂಗಮದಲ್ಲಿ ಉಚ್ಚ ನೀಚವ ನೋಡಲಾಗದು. ಜಂಗಮದಲ್ಲಿ ಹಿರಿದು ಕಿರಿದು ಮಾಡುವ ಭಕ್ತಂಗೆ ಭವ ಹಿಂಗದಯ್ಯ ಅಖಂಡೇಶ್ವರಾ.