ಲಿಂಗಭಕ್ತನಾದ ಬಳಿಕ,
ತನ್ನಂಗದಲ್ಲಿ ಧರಿಸಿರ್ಪ ಲಿಂಗ ಒಂದಲ್ಲದೆ
ಅನ್ಯವನರಿಯದಿರಬೇಕು.
ಆ ಲಿಂಗದಲ್ಲಿ ನೈಷ್ಠಿಕಭಾವ ಇಂಬುಗೊಂಡಿರಬೇಕು.
ಆ ಲಿಂಗವೆ ಪತಿ ತಾನೆ ಸತಿಯೆಂಬ
ದೃಢಬುದ್ಧಿ ನಿಚ್ಚಲವಾಗಿರಬೇಕು.
ಹೀಂಗಲ್ಲದೆ,
ತನ್ನ ದೇಹದ ಮೇಲೆ ಇರುತಿರ್ಪ
ಲಿಂಗವ ಸಾಮಾನ್ಯವ ಮಾಡಿ,
ಕಂಡ ಕಂಡ ದೇಗುಲದೊಳಗಣ ಕಲ್ಲ
ದೇವರೆಂದು ಭಾವಿಸಿ ಪೂಜಿಸುವ
ಗಾವಿಲ ಮೂಳ ಹೊಲೆಯರ
ಮುಖವ ನೋಡಲಾಗದಯ್ಯ
ಅದೆಂತೆಂದೊಡೆ: ವೀರಶೈವಸಂಗ್ರಹ
“ಇಷ್ಟಲಿಂಗಮವಿಶ್ವಾಸಂ ಸ್ಥಾವರಲಿಂಗೇನ ಪೂಜನಂ |
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಎಂದುದಾಗಿ,
ಇಂತಪ್ಪಂತ್ಯಜರನೇನೆಂಬೆನಯ್ಯಾ ಅಖಂಡೇಶ್ವರಾ?