Index   ವಚನ - 295    Search  
 
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಲಿಂಗವನು ಉರದಲ್ಲಿ ಧರಿಸಿಕೊಂಡು ಅದು ದೇವರೆಂದು ನಂಬದೆ ಧರೆಯ ಮೇಲಣ ಕಂಡ ಕಂಡ ಕಲ್ಲ, ದೇವರೆಂದು ಕಲ್ಪಿಸಿ ಹರಿದಾಡುವ ಭಂಡ ಮಾದಿಗರ ಭಕ್ತರೆಂದಡೆ ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.