Index   ವಚನ - 296    Search  
 
ಸದ್ಭಕ್ತರಾದವರು ಸ್ಥಾವರಲಿಂಗದ ಭಜನೆಯ ಮಾಡಲಾಗದು. ಮನದಲ್ಲಿ ಸ್ವಾವರ ಘನವೆಂದು ನೆನೆಯಲಾಗದು. ಅದೇನು ಕಾರಣವೆಂದೊಡೆ: ಆದಿ ಅನಾದಿಯಿಂದತ್ತತ್ತಲಾದ ಮಹಾಘನಪರವಸ್ತುವನು ಶ್ರೀ ಗುರುಸ್ವಾಮಿ ಭೇದಿಸಿ ತಂದು, ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಕೊಟ್ಟ ಬಳಿಕ ಆ ಲಿಂಗದಲ್ಲಿ ಸಕಲ ತೀರ್ಥ, ಸಕಲ ಕ್ಷೇತ್ರಂಗಳುಂಟೆಂದು ಭಾವಿಸಿ, ಮುಕ್ತಿಯ ಪಡೆಯಲರಿಯದೆ ಖಂಡಿತ ಬುದ್ದಿಯಿಂದ ಬೇರೆ ಮುಕ್ತಿಯ ಪಡೆವೆವೆಂದು ಕಂಡ ಕಂಡ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ ತೊಳಲಿ ಬಳಲುವ ಭ್ರಷ್ಟಭವಿಗಳಿಗೆ ನರಕವೇ ಪ್ರಾಪ್ತಿಯಯ್ಯಾ ಅಖಂಡೇಶ್ವರಾ.