Index   ವಚನ - 298    Search  
 
ಅನಂತಕೋಟಿ ಹೀನ ಭವಿಜನ್ಮವ ನೀಗಿ ಶಿವಜನ್ಮಕ್ಕೆ ಬಂದು, ಶ್ರೀಗುರುಕಾರುಣ್ಯವ ಪಡೆದು ಪರಮ ಪವಿತ್ರಕಾಯನೆನಿಸಿ, ಶಿವಭಕ್ತನಾದ ಬಳಿಕ ಮರಳಿ ಭವಿಸಂಗವ ಮಾಡಲಾಗದು. ಅದೇನು ಕಾರಣವೆಂದೊಡೆ: ಹಿಂದಣ ಕ್ರಿಮಿ ಕೀಟಕ ಸುನಿ ಸೂಕರಜನ್ಮ ಬಪ್ಪುದಾಗಿ ಮುಂದೆ ಎಚ್ಚರದಲ್ಲಿ ನಡೆಯಬೇಕು. ಎಚ್ಚರದಪ್ಪಿ ಅರುಹುಮರಹಿನಿಂದ ಭವಿಸಂಗವ ಮಾಡುವ ಭಕ್ತನ ವಿಧಿ ಎಂತಾಯಿತ್ತೆಂದಡೆ: ದೇವರಿಗೆಂದು ನೇಮಿಸಿ ಮಾಡಿದ ಮೀಸಲೋಗರವ ಶ್ವಾನ ಮುಟ್ಟಿದಂತಾಯಿತ್ತಯ್ಯ ಅಖಂಡೇಶ್ವರಾ.