Index   ವಚನ - 307    Search  
 
ಸಲ್ಲರು ಸಲ್ಲರಯ್ಯ ಶಿವಪಥಕ್ಕೆ, ದುರ್ಮತಿ ದುರಾಚಾರಿಗಳು. ಸಲ್ಲರು ಸಲ್ಲರಯ್ಯ ಶಿವಪಥಕ್ಕೆ, ದುರ್ನೀತಿ ದುರ್ಗುಣಿಗಳು. ಸಲ್ಲರು ಸಲ್ಲರಯ್ಯ ಶಿವಪಥಕ್ಕೆ ದುರ್ಬುದ್ಧಿ ದುರ್ಭಾವಿಗಳು ಅಖಂಡೇಶ್ವರಾ.