ತಮ್ಮೊಳಗೆ ತಾವು ತಿಳಿಯಲರಿಯರು,
ಪರವಾಗಿ ಹೇಳಿದರೆ ಗ್ರಹಿಸರು,
ದುರುಳಬುದ್ದಿಯಿಂದ ನಡೆವ
ದುರಾಚಾರಿಗಳ ಮುಖವ ನೋಡಲಾಗದಯ್ಯ
ಅಖಂಡೇಶ್ವರಾ.
Art
Manuscript
Music
Courtesy:
Transliteration
Tam'moḷage tāvu tiḷiyalariyaru,
paravāgi hēḷidare grahisaru,
duruḷabuddiyinda naḍeva
durācārigaḷa mukhava nōḍalāgadayya
akhaṇḍēśvarā.