Index   ವಚನ - 313    Search  
 
ಹಾಲ ಹರವಿಯ ಮೇಲೆ ಮಜ್ಜಿಗೆಯ ತುಂಬಿರಿಸಿದಡೇನು ಹೆಪ್ಪಾಗಬಲ್ಲುದೆ ಅಯ್ಯಾ, ಸಮ್ಮಿ‍ಶ್ರದಿಂದಲ್ಲದೆ. ಅಂಗದ ಮೇಲೆ ಲಿಂಗಧಾರಣವಾದಡೇನು ಸಮರಸವಾಗಬಲ್ಲುದೆ ಅಯ್ಯಾ, ಶಿವಜ್ಞಾನವಿಲ್ಲದೆ ಅಖಂಡೇಶ್ವರಾ.