Index   ವಚನ - 319    Search  
 
ಹೊನ್ನಿನಾಸೆ ಉಳ್ಳನ್ನಕ್ಕರ ಸಂಚಿತಕರ್ಮ ಬಿಡದು. ಮಣ್ಣಿನಾಸೆ ಉಳ್ಳನ್ನಕ್ಕರ ಪ್ರಾರಬ್ಧಕರ್ಮ ಬಿಡದು. ಹೆಣ್ಣಿನಾಸೆ ಉಳ್ಳನ್ನಕ್ಕರ ಆಗಾಮಿಕರ್ಮ ಬಿಡದು. ಇಂತೀ ತ್ರಿವಿಧದಾಸೆ ಉಳ್ಳನ್ನಕ್ಕರ ಭಕ್ತನಲ್ಲ, ಮಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ, ಐಕ್ಯನಲ್ಲ ನೋಡಾ ಅಖಂಡೇಶ್ವರಾ.