Index   ವಚನ - 330    Search  
 
ನಡೆವ ಗತಿಯಲ್ಲಿ ಲಿಂಗದ ನಡೆಯ ತುಂಬಿ ನಡೆಯಬಲ್ಲಡೆ ವಿರಕ್ತರೆಂಬೆನು. ನುಡಿಯ ಕೊನೆಯಲ್ಲಿ ಲಿಂಗದ ನುಡಿಯ ತುಂಬಿ ನುಡಿಯಬಲ್ಲಡೆ ವಿರಕ್ತರೆಂಬೆನು. ಕಂಗಳ ಕೊನೆಯಲ್ಲಿ ಲಿಂಗದ ನೋಟವ ತುಂಬಿ ನೋಡಬಲ್ಲಡೆ ವಿರಕ್ತರೆಂಬೆನು. ಮನದ ಕೊನೆಯಲ್ಲಿ ಲಿಂಗದ ನೆನಹು ತುಂಬಿ ನೆನೆಯಬಲ್ಲಡೆ ವಿರಕ್ತರೆಂಬೆನು. ಭಾವದ ಕೊನೆಯಲ್ಲಿ ಲಿಂಗದ ಬೆಳಗ ತುಂಬಿ ಸುಳಿಯಬಲ್ಲಡೆ ವಿರಕ್ತರೆಂಬೆನು. ಇಂತೀ ಲಿಂಗಾಂಗಸಂಗಸಮರಸದ ಪರಮಸುಖವನರಿಯದೆ ಅರುಹುಹೀನವಾಗಿ ಮರಹು ಮುಂದುಗೊಂಡು ದುರಾಚಾರದಲ್ಲಿ ನಡೆವ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.