Index   ವಚನ - 340    Search  
 
ನಿತ್ಯ ಲಿಂಗಾರ್ಚನೆಯ ಮಾಡುವೆ. ಸತ್ಯ ಸದ್ ಭಕ್ತರ ಮಠವನರಸಿಕೊಂಡು ಹೋಗಿ, ಲಿಂಗ ಮುಂತಾಗಿ ಭಕ್ತಿಭಿಕ್ಷೆಯ ಬೇಡುವೆ. ಅವರು ಇಕ್ಕಿದ ಪದಾರ್ಥವ ಚಿತ್ತಶುದ್ದವಾಗಿ ಕೈಕೊಂಡು ಎನ್ನೊಡೆಯ ಅಖಂಡೇಶ್ವರಲಿಂಗ ಸಹಿತವಾಗಿ ಭೋಗಿಸುವೆ.