Index   ವಚನ - 342    Search  
 
ಜಗವೆಲ್ಲ ಮುನಿದಡಂಜೆ. ಆದಿವ್ಯಾಧಿಗಳು ಬಂದು ತನುವನಂಡಲದಡಂಜೆ. ರಾಜಭಯ, ಚೋರಭಯ, ಮೃಗಭಯ, ಗ್ರಹಭಯಂಗಳು ಬಂದು ನಾಲ್ದೆಸೆಯಲ್ಲಿ ಮುಸುಕಿದಡಂಜೆ. ಮತ್ತೊಂದಕ್ಕಂಜಿ ಅಳುಕುವೆನಯ್ಯ, ಪರರೊಡವೆ ಪರಸ್ತ್ರೀ ಪರಧನವ ಮುಟ್ಟಲಮ್ಮದೆ ಅಖಂಡೇಶ್ವರಾ, ನೀ ಸಾಕ್ಷಿಯಾಗಿ.