Index   ವಚನ - 343    Search  
 
ಮನದೊಡೆಯ ಮನವ ನೋಡುವೆನೆಂದು ನಾಲ್ದೆಸೆಯಲ್ಲಿ ಭಯವನೊಡ್ಡಿದಡೆ ಹೆದರದಿರು ಮನವೆ, ಹೆದರಿ ಹಿಮ್ಮೆಟ್ಟದಿರು ಮನವೆ. ಕಳವಳಗೊಳ್ಳದೆ ಸಂಚಲವಳಿದು ಅತಿ ಕಲಿವಂತನಾದೆಯಾದಡೆ ಅಘಹರ ಅಖಂಡೇಶ್ವರ ನಗುತ ಬಂದೆತ್ತಿಕೊಂಡು ಮುದ್ದಾಡಿ ತನ್ನೊಳಗಿಟ್ಟುಕೊಂಬನು ಕೇಳಾ ಎಲೆ ಮನವೆ.