Index   ವಚನ - 349    Search  
 
ಎನ್ನ ಮಾನಾಪಮಾನವೆಲ್ಲ ನಿಮ್ಮದಯ್ಯ. ಎನ್ನ ಹಾನಿವೃದ್ಧಿಗಳೆಲ್ಲ ನಿಮ್ಮವಯ್ಯ. ಅಖಂಡೇಶ್ವರಾ, ನೀವು ಭಕ್ತದೇಹಿಕ ದೇವರಾದಿರಾಗಿ ಎನ್ನ ಸರ್ವಸುಖ ಪರಿಣಾಮವೆಲ್ಲ ನಿಮ್ಮವೆಂದರಿದನಯ್ಯ.