Index   ವಚನ - 348    Search  
 
ನುಡಿದಂತೆ ನಡೆ ಇಲ್ಲವಯ್ಯ ಎನ್ನಲ್ಲಿ. ನಡೆದಂತೆ ನುಡಿ ಇಲ್ಲವಯ್ಯ ಎನ್ನಲ್ಲಿ, ನುಡಿಹೀನ ಕಡುಪಾಪಿಯಯ್ಯ ನಾನು. ಮನಹೀನ ಮಹಾಪರಾಧಿಯಯ್ಯ ನಾನು. ಎನ್ನೊಳಗೆ ಸುಗುಣವನರಸಿದಡೇನೂ ಹುರುಳಿಲ್ಲವಯ್ಯ ನೀವೇ ಕರುಣಿಸಿ ಪಾಲಿಪುದಯ್ಯ ಎನ್ನ, ಅಖಂಡೇಶ್ವರಾ, ನಿಮ್ಮಧರ್ಮ, ನಿಮ್ಮಧರ್ಮ.