Index   ವಚನ - 351    Search  
 
ಹರಹರಾ ಎಂದು ಹರನೊಳಗೈಕ್ಯರಾದ ಶರಣರ ತೋರಿಸಯ್ಯ. ಶಿವಶಿವಾ ಎಂದು ಶಿವನ ಆಚ್ಚೊತ್ತಿಗೊಂಡ ಶರಣರ ತೋರಿಸಯ್ಯ, ಶ್ರೀಗಿರಿ ಕೈಲಾಸವ ಸೂರೆಗೊಂಡ ಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.