Index   ವಚನ - 352    Search  
 
ಅಂತರಂಗದಲ್ಲಿ ಅಖಂಡ ಪರಿಪೂರ್ಣ ಜ್ಞಾನದ ನಿಲವನರಿದು, ಬಹಿರಂಗದಲ್ಲಿ ಸತ್ಯ ಸದಾಚಾರವನಳವಡಿಸಿಕೊಂಡು, ಹಿಂದು ಮುಂದಣ ಶಂಕೆಯ ಹರಿದು, ಆನಂದವೇ ಒಡಲಾಗಿ ಅಭೇದ್ಯಲಿಂಗದ ಬೆಳಗಿನಲ್ಲಿ ಸುಳಿವ ಅಪ್ರಮಾಣ ಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.