Index   ವಚನ - 353    Search  
 
ಸೃಷ್ಟಿ ಸ್ಥಿತಿ ಪ್ರಳಯಂಗಳ ನೇಮವ ಮೀರಿ, ಕಾಯ ಜೀವದ ಕಷ್ಟಗುಣಂಗಳು ನಷ್ಟವಾಗಿ, ಇಷ್ಟಲಿಂಗದಲ್ಲಿ ನೆಟ್ಟನೆ ಮನವಡಗಿ, ತೊಟ್ಟುಬಿಟ್ಟ ಹಣ್ಣಿನಂತೆ ಸುಳಿವ ಶ್ರೇಷ್ಠ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.