Index   ವಚನ - 355    Search  
 
ಹತ್ತು ದಿಕ್ಕಿನ ಒಳಹೊರಗೆ ಸುತ್ತಿ ಸುಳಿದಾಡುವ ಎನ್ನ ಮನವು ನಿಲುವುದಕ್ಕೆ ನೀವೇ ಗೊತ್ತಲ್ಲದೆ ಬೇರೆ ಮತ್ತೆ ಸ್ನಾನ ಉಂಟೆ ಅಯ್ಯ? ಗಾಳಿ ಗಂಧವನಪ್ಪಿದಂತೆ, ನಿಮ್ಮ ಮುಟ್ಟಿದ ಚಿತ್ತ ಎತ್ತೆತ್ತ ಹರಿದಾಡಿದಡೇನು ಅತ್ತತ್ತ ನೀವೇ ಅಲ್ಲದೆ ಬೇರೆ ಮತ್ತೆ ಅನ್ಯವಿಲ್ಲವಯ್ಯ ಅಖಂಡೇಶ್ವರಾ.