Index   ವಚನ - 375    Search  
 
ಶಿವನೇ ಗುರುವೆಂದು ತಿಳಿದು ವಿಶ್ವಾಸಭಾವತುಂಬಿರಬೇಕು ಗುರುವಿನಲ್ಲಿ, ಶಿವನೇ ಲಿಂಗವೆಂದು ತಿಳಿದು ವಿಶ್ವಾಸಭಾವತುಂಬಿರಬೇಕು ಲಿಂಗದಲ್ಲಿ. ಶಿವನೇ ಜಂಗಮವೆಂದು ತಿಳಿದು ವಿಶ್ವಾಸಭಾವತುಂಬಿರಬೇಕು ಜಂಗಮದಲ್ಲಿ. ಶಿವನೇ ಪಾದೋದಕಪ್ರಸಾದವೆಂದು ತಿಳಿದು ವಿಶ್ವಾಸಭಾವತುಂಬಿರಬೇಕು ಪಾದೋದಕಪ್ರಸಾದದಲ್ಲಿ. ಇಂತಿವರಲ್ಲಿ ವಿಶ್ವಾಸಭಾವವಿಲ್ಲದವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕಪ್ರಸಾದವಿಲ್ಲ. ಮುಕ್ತಿ ಎಂಬುದು ಮುನ್ನವೇ ಇಲ್ಲ. ಅವರೆಷ್ಟು ದಿನವಿದ್ದಡೂ ವ್ಯರ್ಥ ಕಾಣಯ್ಯಾ. ಅದೆಂತೆಂದೊಡೆ: ಶಿವರಹಸ್ಯ- ಜೀವಿತಂ ಶಿವಭಕ್ತಾನಾಂ ವರಂ ಪರಂ ಚ ದಿನಾನಿ ಚ | ಅಜಕಲ್ಪಸಹಸ್ರೇಭ್ಯೋ ಭಕ್ತಿಹೀನಂತು ಶಾಂಕರಿ ||'' ಇದು ಕಾರಣ, ವಿಶ್ವಾಸಹೀನರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.