ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು.
ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು.
ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು.
ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು.
ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು.
ಐಕ್ಯನಾದಡೆ ಭಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು.
ಅದೆಂತೆಂದೊಡೆ:
ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ |
ಸಮ್ಯಗ್ ಜ್ಞಾನಮಿತಿ ಪ್ರಾಜ್ಞೈಃ ಸ್ಥಲಷಟ್ಕಮುದಾಹೃತಮ್ ||''
ಎಂದುದಾಗಿ,
ಇಂತಪ್ಪ ಷಟ್‍ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ
ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ
ಅಖಂಡೇಶ್ವರಾ.
Art
Manuscript
Music
Courtesy:
Transliteration
Bhaktanādaḍe citta niścalavāgi sadbhakti nelegoṇḍirabēku.
Mahēśvaranādaḍe sakalakarmavu kṣayavāgirabēku.
Prasādiyādaḍe śivajñānaparāyaṇanāgirabēku.
Prāṇaliṅgiyādaḍe nityānityavicāravanaridirabēku.
Śaraṇanādaḍe garva ahaṅkārada moḷeya muridirabēku.
Aikyanādaḍe bhinnabhāvavanaḷidu mahājñānadoḷage ōlāḍabēku.
Adentendoḍe:
Bhaktiḥ karmakṣayō bud'dhirvicārō darpasaṅkṣayaḥ |
samyag jñānamiti prājñaiḥ sthalaṣaṭkamudāhr̥tam ||''
endudāgi,
intappa ṣaṭsthalavēdyarāda mahāśaraṇara okkumikka
prasādavanē karuṇisi badukisayya enna
akhaṇḍēśvarā.