Index   ವಚನ - 381    Search  
 
ಜೀವಭಾವದಿಂದೆ ಜೀವನ ತಿಂದು ಜೀವಿಸಿ ಜನನ ಮರಣಂಗಳಿಂದ ದುಃಖಬಡುತಿರ್ಪುವು ನೋಡಾ ಸಕಲ ಪ್ರಾಣಿಗಳು. ಅದೆಂತೆಂದೊಡೆ: ಪೃಥ್ವಿಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ | ಆತ್ಮ ಜೀವಸಮಾಯುಕ್ತಃ ಜೀವಃ ಜೀವೇನ ಭಕ್ಷ್ಯತೇ ||'' ಎಂದುದಾಗಿ, ಇಂತಪ್ಪ ಜೀವಮಯವಾದ ಪದಾರ್ಥವನು ಶುದ್ಧಸಂಸ್ಕಾರವ ಮಾಡಿ, ಲಿಂಗಜಂಗಮದ ಮುಖದಲ್ಲಿ ಸಮರ್ಪಿಸಿ, ಲಿಂಗಜಂಗಮದ ಮುಖದಲ್ಲಿ ಒದಗಿದ ಪರಮಪ್ರಸಾದವನು ಭೋಗಿಸುವ ಸದ್ ಭಕ್ತಂಗೆ ಜನನಮರಣಂಗಳು ದೂರವಾಗಿರ್ಪುವಯ್ಯಾ ಅಖಂಡೇಶ್ವರಾ.