ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಬ
ಪರಮದ್ರೋಹಿಗಳನೇನೆಂಬೆ?
ಪ್ರಸಾದಿಗೆ ಪರಸ್ತ್ರೀಯರ ಅಪ್ಪುಗೆಯುಂಟೆ?
ಪ್ರಸಾದಿಗೆ ಪರದೈವದ ಪೂಜೆಯುಂಟೆ?
ಪ್ರಸಾದಿಗೆ ಪರದೈವದ ಪ್ರೇಮವುಂಟೆ?
ಪ್ರಸಾದಿಗೆ ಪ್ರಪಂಚಿನ ವ್ಯವಹಾರ ಉಂಟೆ?
ಇಂತೀ ತಥ್ಯಮಿಥ್ಯದ ಹೋರಾಟದಲ್ಲಿದ್ದು
ತೊತ್ತಿನೆಂಜಲ ತಿಂಬ ತೊನ್ನ ಹೊಲೆಯರಿಗೆ
ಉನ್ನತ ಪ್ರಸಾದವೆಲ್ಲಿಯದಯ್ಯ ಅಖಂಡೇಶ್ವರಾ?
Art
Manuscript
Music
Courtesy:
Transliteration
Prasādi prasādigaḷendu nuḍidukomba
paramadrōhigaḷanēnembe?
Prasādige parastrīyara appugeyuṇṭe?
Prasādige paradaivada pūjeyuṇṭe?
Prasādige paradaivada prēmavuṇṭe?
Prasādige prapan̄cina vyavahāra uṇṭe?
Intī tathyamithyada hōrāṭadalliddu
tottinen̄jala timba tonna holeyarige
unnata prasādavelliyadayya akhaṇḍēśvarā?