Index   ವಚನ - 383    Search  
 
ಇಷ್ಟಲಿಂಗಕ್ಕೆ ರೂಪುಪದಾರ್ಥವನರ್ಪಿಸಿ, ಆ ಇಷ್ಟಲಿಂಗದಮುಖದಲ್ಲಿಯೇ ರೂಪುಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ, ಆ ಪ್ರಾಣಲಿಂಗದಮುಖದಲ್ಲಿಯೇ ರುಚಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ, ಆ ಭಾವಲಿಂಗದಮುಖದಲ್ಲಿಯೇ ತೃಪ್ತಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಇಂತೀ ಭೇದವನರಿಯದೆ ಒಡಲಕಕ್ಕುಲತೆಗೆ ಒಗುಮಿಗೆ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂದು ತನು ಕೊಡಹಿ, ಮನ ಹೇಸಿ, ರಣಭೂತನಂತೆ ಕಂಡಕಂಡತ್ತ ಚೆಲ್ಲುವ ದಿಂಡೆಯ ಮೂಳ ಭಂಡ ಹೊಲೆಯರಿಗೆ ಶಿವಪ್ರಸಾದದ ಒಲುಮೆಯೆಲ್ಲಿಯದಯ್ಯ ಅಖಂಡೇಶ್ವರಾ.