Index   ವಚನ - 386    Search  
 
ಗುರುಪ್ರಸಾದಿಯಾದಡೆ ಬಡತನ ಎಡರು ಕಂಟಕಂಗಳು ಬಂದು ತಾಗಿದಲ್ಲಿ ಧೈರ್ಯಗುಂದದಿರಬೇಕು. ಲಿಂಗಪ್ರಸಾದಿಯಾದಡೆ ಉಪಾಧಿಯಿಂದ ಪರರಿಗೆ ಬಾಯ್ದೆರೆಯದಿರಬೇಕು. ಜಂಗಮಪ್ರಸಾದಿಯಾದಡೆ ಅಂಗಕ್ಕೆ ವ್ಯಾಧಿ ಸಂಘಟಿಸಿದಲ್ಲಿ ನಾರು ಬೇರು ವೈದ್ಯವ ಕೊಳ್ಳದಿರಬೇಕು. ಇಂತೀ ಪ್ರಸಾದದ ಘನವನರಿಯದ ಸಂತೆಯ ಸೂಳೆಯ ಮಕ್ಕಳಿಗೆ ಎಂತು ಮೆಚ್ಚುವನಯ್ಯ ನಮ್ಮ ಅಖಂಡೇಶ್ವರ?