Index   ವಚನ - 389    Search  
 
ಲಿಂಗವನರಿಯದ ಅಂಗವಿಕಾರಿಗೇತಕೋ ಶಿವಪ್ರಸಾದ? ಜಂಗಮವನರಿಯದ ಭಂಗಗೇಡಿಗೇತಕೋ ಶಿವಪ್ರಸಾದ? ಜ್ಞಾನವನರಿಯದ ಅಜ್ಞಾನಿಗೇತಕೋ ಶಿವಪ್ರಸಾದ? ನೀತಿಯನರಿಯದ ಆತ್ಮಸುಖಿಗೇತಕೋ ಶಿವಪ್ರಸಾದ? ಆಚಾರವನರಿಯದ ಅನಾಚಾರಿಗೇತಕೋ ಶಿವಪ್ರಸಾದ ಅಖಂಡೇಶ್ವರಾ?