ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ
ಎನ್ನ ಭಾವದ ನಂಬಿಗೆಯ ಬಣ್ಣಿಸುತಿರ್ಪೆನಯ್ಯ,
ಅವಧರಿಸಯ್ಯ ಸ್ವಾಮಿ.
ಗುರುಲಿಂಗಜಂಗಮದ ಪರಮಪ್ರಸಾದವನು
ಪರಬ್ರಹ್ಮವೆಂದು ನಂಬಿ
ಪರಮಾನಂದದಿಂ ಕೈಕೊಂಡು ಪರಿಣಾಮ ತುಂಬಿ
ಆರೋಗಣೆಯ ಮಾಡುವಾಗ,
ಆ ಪ್ರಸಾದದಲ್ಲಿ ಉಪ್ಪು ಸಪ್ಪೆ ಹುಳಿ ಕಹಿ ಒಳಿತು ಹೊಲ್ಲ
ಉಚ್ಚ ನೀಚವನರಸಿದೆನಾದಡೆ ನಿಮ್ಮಾಣೆಯಯ್ಯಾ.
ಮುಂದಿರ್ದ ಶಿವಪ್ರಸಾದದ ಘನವ ಮರೆದು
ಎನ್ನೊಡಲ ಕಕ್ಕುಲತೆಗೆ ಮನವೆಳಸಿದೆನಾದಡೆ
ಅಖಂಡೇಶ್ವರಾ, ನಿಮ್ಮಾಣೆಯಯ್ಯಾ,
ನಿಮ್ಮ ಪ್ರಮಥರಾಣೆಯಯ್ಯ.
Art
Manuscript
Music
Courtesy:
Transliteration
Dēvaradēva mahāprasāda trikaraṇaśud'dhavāgi
enna bhāvada nambigeya baṇṇisutirpenayya,
avadharisayya svāmi.
Guruliṅgajaṅgamada paramaprasādavanu
parabrahmavendu nambi
paramānandadiṁ kaikoṇḍu pariṇāma tumbi
ārōgaṇeya māḍuvāga,
ā prasādadalli uppu sappe huḷi kahi oḷitu holla
ucca nīcavanarasidenādaḍe nim'māṇeyayyā.
Mundirda śivaprasādada ghanava maredu
ennoḍala kakkulatege manaveḷasidenādaḍe
akhaṇḍēśvarā, nim'māṇeyayyā,
nim'ma pramatharāṇeyayya.