ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆ ಹಸ್ತ;
ಆ ಹಸ್ತಕ್ಕೆ ಇಚ್ಛಾಶಕ್ತಿ, ಆ ಶಕ್ತಿಗೆ ಶಿವಲಿಂಗ,
ಆ ಶಿವಲಿಂಗಕ್ಕೆ ನೇತ್ರೇಂದ್ರಿಯವೆ ಮುಖ,
ಆ ಮುಖಕ್ಕೆ ಸುರೂಪುಪದಾರ್ಥ; ಆ ಪದಾರ್ಥವನು
ನೇತ್ರದಲ್ಲಿಹ ಶಿವಲಿಂಗಕ್ಕೆ ಸಾವಧಾನಭಕ್ತಿಯಿಂದರ್ಪಿಸಿ,
ಆ ಸುರೂಪುಪ್ರಸಾದವನು ಪಡೆದು ಸುಖಿಸುವಾತನೆ
ಪ್ರಸಾದಿಯಯ್ಯಾ ಅಖಂಡೇಶ್ವರಾ.